ಮಾಯದಂಥ ಮಳೆ ಬಂತಣ್ಣ
ಜಾನಪದ
ಮಾಯದಂಥ ಮಳೆ ಬಂತಣ್ಣ
ಮಗದಾದ ಕೆರೆಗೆ
ಅಂಗೈಯಗಲ ಮೋಡನಾಡಿ
ಭೂಮಿತೂಕದ ಗಾಳಿಬೀಸಿ
ಗುಡಗಿ ಗುಡಾಡಿ ಚೆಲ್ಲಿದಳೊ ಗಂಗಮ್ಮ ತಾಯಿ ||
ಏರಿಮ್ಯಾಗಳ ಬಳ್ಳಾಲು ರಾಯ
ಕೆರೆಯ ಒಅಳಗಲ ಬೆಸ್ತಾರು ಹುಡುಗ
ಓಡಿ ಓಡಿ ಸುದ್ದಿಯ ಕೊಡಿರಯ್ಯೋ
ನಾ ನಿಲ್ಲುವಳಲ್ಲ ||
ಅರುಸಾವಿರ ವಡ್ಡರ ಕರೆಸಿ
ಮೂದು ಸಾವಿರ ಗುದ್ದಲಿ ತರಿಸಿ
ಸೋಲು ಸೋಲಿಗೆ ಮಣ್ಣ ಹಾಕಿಸಯ್ಯೊ
ನಾ ನಿಲ್ಲುವಳಲ್ಲ ||
ಆರು ಸಾವಿರ ಕುರಿಗಳ ತರಿಸಿ
ಮೂರು ಸಾವಿರ ಕುಡುಗೋಲು ತರಿಸಿ
ಕಲ್ಲುಕಲ್ಲಿಗೆ ರೈತವ ಬಡಿಸಯ್ಯೋ
ನಾ ನಿಲ್ಲುವಳಲ್ಲ ||
ಒಂದು ಬಂಡೀಲಿ ವೀಎದಡಿಕೆ
ಒಂದು ಬಂಡೀಲಿ ಚಿಗಲಿ ತಮಟ
ಮೂಲೆ ಮೂಲೆಗೆ ಗಂಗಮ್ಮನ ಮಾಡಿಸಯ್ಯೋ
ನಾ ನಿಲ್ಲುವಳಲ್ಲ ||